ಕುದಿಯುವ ಎಣ್ಣೆಯಲ್ಲಿ ಕೈ ಹಾಕಿದರೂ ಅಯ್ಯಪ್ಪನ ಭಕ್ತರಿಗೆ ಏನೂ ಆಗಲಿಲ್ಲ.. ವಿಡಿಯೋ - ಎಣ್ಣೆಯಲ್ಲಿ ಕೈ ಹಾಕಿ ವಡೆಯನ್ನು ತೆಗೆದ ಅಯ್ಯಪ್ಪ ಮಾಲಾಧಾರಿಗಳು
ಹುಬ್ಬಳ್ಳಿ: ಶಬರಿನಗರದಲ್ಲಿ ಅಯ್ಯಪ್ಪ ಮಾಲಾಧಾರಿಗಳು ಕುದಿಯುವ ಎಣ್ಣೆಯಲ್ಲಿ ಕೈ ಹಾಕಿ ವಡೆ ತೆಗೆಯುವ ಮೂಲಕ ಸ್ವಾಮಿಗೆ ಎಣ್ಣೆ ಸೇವೆ ಸಲ್ಲಿಸಿದರು. ಒಂದು ಹನಿ ಸುಡುವ ಎಣ್ಣೆ ಮೈಮೇಲೆ ಬಿದ್ದರೆ ಬೊಬ್ಬೆ ಏಳುತ್ತೆ. ಆದರೆ, ಎಣ್ಣೆಯಲ್ಲಿ ಕೈ ಇಟ್ಟರೂ ಕೂಡ ಸುಟ್ಟ ಗಾಯಗಳಾಗದಿರುವುದು ವಿಶೇಷ. ನೂರಾರು ಅಯ್ಯಪ್ಪ ಮಾಲಾಧಾರಿಗಳು ಕುದಿಯುವ ಎಣ್ಣೆಯಲ್ಲಿ ಕೈ ಹಾಕಿ ವಡೆ ತಗೆದು ಭಕ್ತಿಯ ಪರಾಕಾಷ್ಠೆ ಮೆರೆದರು.