ಕಲಬುರಗಿ ಜಿಲ್ಲೆಯಾದ್ಯಂತ ಆಯುಧ ಪೂಜೆ ಸಂಭ್ರಮ - kalburgi latest update news
ಜಿಲ್ಲೆಯಾದ್ಯಂತ ಆಯುಧ ಪೂಜೆ ಸಂಭ್ರಮ ಮನೆಮಾಡಿದೆ. ನವರಾತ್ರಿ ಅಂಗವಾಗಿ ಜನರು ತಾವು ಬಳಸುವ ಸಲಕರಣೆಗಳಿಗೆ ಪೂಜೆ ಸಲ್ಲಿಸಿದರು. ಪೊಲೀಸ್ ಸಿಬ್ಬಂದಿ ತಾವು ಬಳಕೆ ಮಾಡೋ ರೈಫಲ್, ಬಂದೂಕು ಇತ್ಯಾದಿಗಳಿಗೆ ಪೂಜೆ ನೆರವೇರಿಸಿದರು. ವಾಹನಗಳಿಗೂ ತಳಿರು, ತೋರಣ ಕಟ್ಟಿ, ಹೂನಿನಿಂದ ಅಲಂಕರಿಸಿ ಪೂಜೆ ಸಲ್ಲಿಸಿದರು. ಆಯುಧ ಪೂಜೆ ಹಿನ್ನೆಲೆ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿತ್ತು. ದರ ಏರಿಕೆಯಾಗಿದರೂ ಜನರು ಹೂವು, ಹಣ್ಣು, ತರಕಾರಿ ಖರೀದಿಯಲ್ಲಿ ತೊಡಗಿದ್ದರು.