ಕ್ರೈಸ್ತ ಸಮುದಾಯದಿಂದ ಆಯುಧ ಪೂಜೆ-ಸಂತ ಕ್ರಿಸ್ಟೋಫರ್ಗೆ ಪ್ರಾರ್ಥನೆ - ಆಯುಧ ಪೂಜೆ ಆಚರಣೆ
ಹಿಂದೂಗಳ ಪವಿತ್ರ ಹಬ್ಬವಾದ ಆಯುಧ ಪೂಜೆಯನ್ನು ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದ ಕ್ರೈಸ್ಥ ಸಮುದಾಯದವರು ಸಂತ ಲೂರ್ದುಮಾತೆ ಚರ್ಚ್ನಲ್ಲಿ ಆಚರಿಸಿದರು. ಪಾದ್ರಿ ಕ್ರಿಸ್ಟೋಫರ್ ಸಗಾಯರಾಜ್ ಪ್ರಾರ್ಥನೆ ಮಾಡಿ ಪವಿತ್ರ ಜಲವನ್ನು ವಾಹನಗಳಿಗೆ ಪ್ರೋಕ್ಷಿಸಿ ಶುಭ ಹಾರೈಸಿದರು. ಈ ವೇಳೆ, ಅಪಘಾತಗಳಿಂದ ಪಾರು ಮಾಡುವ ರಕ್ಷಕ ಎಂದೇ ಕರೆಯುವ ಸಂತ ಕ್ರಿಸ್ಟೋಫರ್ಗೆ ವಾಹನಗಳ ಮಾಲೀಕರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮುಸ್ಲಿಂ ಸಮುದಾಯದ ಕೆಲವರು ಇದರಲ್ಲಿ ಭಾಗಿಯಾಗಿದ್ದು ವಿಶೇಷ.