ಅಯೋಧ್ಯೆ ತೀರ್ಪು ಪ್ರಕಟ: ಚಿತ್ರದುರ್ಗದಲ್ಲಿ ಪೊಲೀಸ್ ಪಥಸಂಚಲನ - Chitradurga news
ಚಿತ್ರದುರ್ಗ: ಅಯೋಧ್ಯೆ ಭೂವಿವಾದ ಸಂಬಂಧ ಸುಪ್ರೀಂ ತೀರ್ಪು ಪ್ರಕಟಿಸಿದ ಬೆನ್ನಲ್ಲೇ ಚಿತ್ರದುರ್ಗದಲ್ಲಿ ಪೊಲೀಸರು ಪರೇಡ್ ನಡೆಸಿದರು. ತೀರ್ಪು ಹೊರಬಿದ್ದ ಹಿನ್ನೆಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ನೇತೃತ್ವದಲ್ಲಿ ಪೊಲೀಸರು ಪಥಸಂಚಲನ ನಡೆಸಿದರು. ಚಿತ್ರದುರ್ಗ ನಗರದ ಅಂಬೇಡ್ಕರ್ ವೃತ್ತದಿಂದ ಆರಂಭವಾದ ಪೊಲೀಸರ ಪರೇಡ್ ಐಬಿ ವೃತ್ತ, ಗಾಂಧಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ ಸೇರಿದ್ದಂತೆ ಕನಕ ವೃತ್ತಕ್ಕೆ ತಲುಪುವ ಮೂಲಕ ಹೊಳಲ್ಕೆರೆ ರಸ್ತೆಯಲ್ಲಿ ಅಂತ್ಯಗೊಂಡಿತು. ಅಯೋಧ್ಯೆ ತೀರ್ಪು ಪ್ರಕಟ ಹಿನ್ನೆಲೆ ನಗರದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಪೆರೇಡ್ ನಡೆಸಲಾಗಿದೆ.