ರಮೇಶ್ ಜಾರಕಿಹೊಳಿ ಭಸ್ಮಾಸುರ ಆದ್ರೆ, ಲಕ್ಷ್ಮೀ ಮೋಹಿನಿ ಆಗ್ತಾರಾ: ಅಯನೂರು ವ್ಯಂಗ್ಯ - BJp MLC Ayanur Manjunath angry about MLA lakshmi Hebbalkar
ದಾವಣಗೆರೆ: ರಮೇಶ್ ಜಾರಕಿಹೊಳಿ ಭಸ್ಮಾಸುರ ಆದ್ರೆ, ಲಕ್ಷ್ಮೀ ಹೆಬ್ಬಾಳ್ಕರ್ ಮೋಹಿನಿ ಆಗ್ತಾರಾ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಅಯನೂರು ಮಂಜುನಾಥ್ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಭಸ್ಮಾಸುರ ಎಂಬ ಹೇಳಿಕೆ ನೀಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್ಗೆ ಟಾಂಗ್ ನೀಡಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಮೊದಲ ಬಾರಿ ಶಾಸಕರಾಗಿದ್ದಾರೆ. ಹಾಗಾಗಿ ಇತಿಮಿತಿ ಮೀರಿ ಮಾತನಾಡುತ್ತಾರೆ ಎಂದಿದ್ದಾರೆ.