ಕೊರೊನಾ ಬಗ್ಗೆ ಕೊಪ್ಪಳ ಪೊಲೀಸರಿಂದ ಜಾಗೃತಿ ವಿಡಿಯೋ ಬಿಡುಗಡೆ - koppala corona Awareness video
ಕೊರೊನಾ ಕಂಟ್ರೋಲ್ ಮಾಡಲು ಸರ್ಕಾರ ಲಾಕ್‌ಡೌನ್ ಮೂಲಕ ಅನೇಕ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ವಿವಿಧ ರೀತಿಯಲ್ಲಿ ಜನ ಜಾಗೃತಿಯನ್ನೂ ಮೂಡಿಸುತ್ತಿದೆ. ಕೊರೊನಾ ಮುಂಜಾಗ್ರತೆ ಕುರಿತು ಕೊಪ್ಪಳ ಜಿಲ್ಲಾ ಪೊಲೀಸರು ಜಾಗೃತಿ ವಿಡಿಯೋ ಮಾಡಿ ಬಿಡುಗಡೆ ಮಾಡಿದ್ದಾರೆ. ಯಲಬುರ್ಗಾ ಪೊಲೀಸರು ಈ ಜಾಗೃತಿ ವಿಡಿಯೋ ಸಿದ್ಧಪಡಿಸಿದ್ದು, ಕೊರೊನಾ ಸೋಂಕು ಹರಡುವ ರೀತಿ, ಸೋಂಕು ಹರಡದಂತೆ ಜಾಗೃತಿ ವಹಿಸುವ ಕುರಿತು ತಿಳುವಳಿಕೆ ನೀಡುವ ಅಂಶಗಳು ಇಲ್ಲಿವೆ. ವಿಡಿಯೋ ನೋಡಿ.