ಅರಕಲಗೋಡು: ಸಾಂಕ್ರಾಮಿಕ ರೋಗಗಳ ವಿರುದ್ಧ ಬೀದಿ ನಾಟಕದ ಮೂಲಕ ಜಾಗೃತಿ - ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಅರಕಲಗೂಡು (ಹಾಸನ): ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಅರಕಲಗೂಡು, ರಾಷ್ಟ್ರೀಯ ಆರೋಗ್ಯ ಅಭಿಯಾನ ಆರೋಗ್ಯ ಶಿಕ್ಷಣ ವಿಭಾಗ ಇವರ ವತಿಯಿಂದ ತಾಲೂಕು ಸಾರ್ವಜನಿಕ ಆಸ್ಪತ್ರೆ ಮುಂಭಾಗ ನಿರಂತರ ಸಾಂಸ್ಕೃತಿಕ ಕಲಾ ತಂಡದವರು ಆರೋಗ್ಯ ಇಲಾಖೆಯ ಕಾರ್ಯಕ್ರಮಗಳಾದ ಸಾಂಕ್ರಾಮಿಕ ರೋಗಗಳ ನಿಯಂತ್ರಣ, ಪ್ಲೋರೋಸಿಸ್ ನಿಯಂತ್ರಣ, ಸ್ವಚ್ಛತೆ, ಕೋವಿಡ್-19 ಮುಂಜಾಗ್ರತೆ ಸೇರಿ ಹಲವು ವಿಚಾರಗಳ ಕುರಿತು ಬೀದಿ ನಾಟಕ ಪ್ರದರ್ಶನದ ಮೂಲಕ ಜಾಗೃತಿ ಮೂಡಿಸಿದರು.