ಸರಸ್ವತಿ ಸಂಗೀತ ತಂಡದಿಂದ ಕೊರೊನಾ ವೈರಸ್ ಬಗ್ಗೆ ಜಾಗೃತಿ ಗೀತೆ - ಗ್ರಾಮ ಪಂಚಾಯತ್ ಸದಸ್ಯರು ಆಗಿರುವ ಅಶೋಕ ಮೈತ್ರಿ
ಬಾಗಲಕೋಟೆ: ಜಿಲ್ಲೆಯ ಮುಧೋಳ ತಾಲೂಕಿನ ಮುಗಳಖೋಡ ಗ್ರಾಮ ಸರಸ್ವತಿ ಸಂಗೀತ ತಂಡ ಕೊರೊನಾ ವೈರಸ್ ಬಗ್ಗೆ ಸಂಗೀತದ ಮೂಲಕ ಜಾಗೃತಿ ಮೂಡಿಸುದ್ದಿದೆ. ಗ್ರಾಮ ಪಂಚಾಯತ್ ಸದಸ್ಯರೂ ಆಗಿರುವ ಅಶೋಕ ಮೈತ್ರಿ ಸಾಹಿತ್ಯ ರಚಿಸಿ, ತಮ್ಮ ಕಂಚಿನ ಕಂಠದಲ್ಲಿ ಹಾಡಿ, ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಹಾರ್ಮೋನಿಯಂ ಅನ್ನು ಚಂದ್ರು ಮಾದರ, ಮಾದೇವ ಬೆಳಗಲಿ ತಾಳ ಹಾಗೂ ತಬಲವನ್ನು ಸುರೇಶ ಸುತಾರ ನುಡಿಸಿದ್ದಾರೆ.