ಕೊರೊನಾ ಜಾಗೃತಿ... ಶಿವಮೊಗ್ಗ ಜನರಿಗೆ ಬುದ್ಧಿ ಹೇಳಿದ ಯಮ ಕಿಂಕರ - ಕೊರೊನಾ ಬಗ್ಗೆ ಜನರಲ್ಲಿ ಭಯ
ಕೊರೊನಾ ಬಗ್ಗೆ ಜನರಲ್ಲಿ ಭಯವಿದೆ, ಆದ್ರೆ ಕೊರೊನಾದಿಂದ ದೂರವಿರಬೇಕು ಎಂಬ ಅರಿವು ಇಲ್ಲ. ಈಗಲೂ ಜನ ಮಾಸ್ಕ್ ಧರಿಸದೆ, ಅಂತರ ಕಾಯ್ದುಕೊಳ್ಳದೆ ಓಡಾಡುತ್ತಿದ್ದಾರೆ. ಹೀಗಾಗಿ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಶಿವಮೊಗ್ಗ ಜಿಲ್ಲಾಡಳಿತವು ಯಮ, ಕಿಂಕರ ಹಾಗೂ ಕೊರೊನಾ ವೈರಸ್ ವೇಷಧಾರಿಗಳಿಂದ ಜಾಗೃತಿ ಕಾರ್ಯಕ್ರಮ ನಡೆಸಿತು.