ಪ್ಲಾಸ್ಟಿಕ್ ಬಳಕೆ ನಿಷೇಧ ಬಗ್ಗೆ ಜಾಗೃತಿ ಮೂಡಿಸಿದ ಕಲಬುರಗಿ ಮಹಾನಗರ ಪಾಲಿಕೆ.. - Kalburgi latest news
ಕಲಬುರಗಿ ಮಹಾನಗರ ಪಾಲಿಕೆ ವತಿಯಿಂದ ಘನ ತ್ಯಾಜ್ಯ ವಿಲೇವಾರಿ ಮತ್ತು ಪ್ಲಾಸ್ಟಿಕ್ ಬಳಕೆ ನಿಷೇಧದ ಕುರಿತು ನಗರದಲ್ಲಿ ಆಯೋಜಿಸಿದ್ದ ಜಾಗೃತಿ ಜಾಥಾ ಗಮನ ಸೆಳೆಯಿತು. ನಗರದ ವಿವಿಧ ಬಡಾವಣೆಗಳಿಂದ ಪ್ಲಾಸ್ಟಿಕ್ ಶವಯಾತ್ರೆ ಮಾಡಿಕೊಂಡು ಬರಲಾಯ್ತು. ಪ್ಲಾಸ್ಟಿಕ್ ಶವದ ಮುಂದೆ ಪಾಲಿಕೆ ಸಿಬ್ಬಂದಿ ಅತ್ತು ಗೋಳಾಡೋದು ಇತ್ಯಾದಿ ನಡೆದವು. ಪ್ಲಾಸ್ಟಿಕ್ ನಿಷೇಧದ ಜೊತೆ ಜೊತೆಗೆ ಪರಿಸರ ಸಂರಕ್ಷಣೆಗೆ ಮರಗಳನ್ನು ಬೆಳೆಸುವ ಕುರಿತು ಜಾಗೃತಿ ಮೂಡಿಸಲಾಯಿತು.