ಕಂಪ್ಲಿ ಸೇತುವೆ ಭಾಗಶಃ ಜಲಾವೃತ: ನದಿ ಪಾತ್ರದ ಮೀನುಗಾರರ ಸ್ಥಳಾಂತರಕ್ಕೆ ಸೂಚನೆ - ಕಂಪ್ಲಿ ಸೇತುವೆ ಭಾಗಶಃ ಜಲಾವೃತ
ಬಳ್ಳಾರಿ: ಜಿಲ್ಲೆಯ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಈ ದಿನ ಅಂದಾಜು 1.12 ಕ್ಯೂಸೆಕ್ ನೀರನ್ನು ಹರಿಬಿಟ್ಟಿದ್ದು, ಕಂಪ್ಲಿಯ ನದಿ ಪಾತ್ರದಲ್ಲಿ ಈಗಾಗಲೇ ಡಂಗೂರ ಸಾರಿಸಿ ಜಾಗೃತಿ ಮೂಡಿಸಲಾಗಿದೆ. ಅಂದಾಜು 54 ಮೀನುಗಾರರ ಕುಟುಂಬಗಳ ಸ್ಥಳಾಂತರಕ್ಕೆ ಸೂಕ್ತ ಕ್ರಮ ವಹಿಸಲಾಗುವುದೆಂದು ಕಂಪ್ಲಿ ತಹಶೀಲ್ದಾರ್ ಗೌಸಿಯಾ ಬೇಗಂ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ. ಇನ್ನು ನದಿ ಪಾತ್ರದಲ್ಲಿ ಯಾವ ರೀತಿಯ ಕಟ್ಟೆಚ್ಚರ ವಹಿಸಲಾಗಿದೆ ಎಂಬುದರ ಕುರಿತು ಬಳ್ಳಾರಿಯ ನಮ್ಮ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ.