ಹಾಫ್ ಹೆಲ್ಮೆಟ್ ಬಗ್ಗೆ ನಗರದೆಲ್ಲೆಡೆ ಪೊಲೀಸರಿಂದ ಜಾಗೃತಿ : ದೋಷಪೂರಿತ ಹೆಲ್ಮೆಟ್, ಸೈಲೆನ್ಸರ್ ನಾಶ - ಬೆಂಗಳೂರಿನಲ್ಲಿ ಹಾಫ್ ಹೆಲ್ಮೆಟ್ ಬಗ್ಗೆ ಪೊಲೀಸರಿಂದ ಜಾಗೃತಿ
ಬೈಕ್ ಚಾಲನೆ ವೇಳೆ ಸುರಕ್ಷಿತವಾದ ಹೆಲ್ಮೆಟ್ ಧರಿಸುವಂತೆ ಟ್ರಾಫಿಕ್ ಪೊಲೀಸರು ಎಲ್ಲೆಡೆ ಜಾಗೃತಿ ಮೂಡಿಸುತ್ತಿದ್ದಾರೆ. ಸಂಚಾರ ಪೊಲೀಸರ ಅರಿವಿನ ಕಾರ್ಯಕ್ಕೆ ವಾಹನ ಸವಾರರು ಸಾಥ್ ನೀಡಿದ್ದಾರೆ. ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಟ್ರಾಫಿಕ್ ಪೊಲೀಸರು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಬರುವ ಪ್ರಮುಖ ಜಂಕ್ಷನ್, ಮುಖ್ಯರಸ್ತೆಗಳಲ್ಲಿ ಹಾಫ್ ಹೆಲ್ಮೆಟ್ ಬಗ್ಗೆ ತಿಳುವಳಿಕೆ ಮೂಡಿಸಿದರು. ಅರ್ಧ ಹೆಲ್ಮೆಟ್ ಧರಿಸಿದರೆ ಉಂಟಾಗುವ ಅನಾಹುತಗಳ ಬಗ್ಗೆ ತಿಳಿ ಹೇಳಿದರು. ಇದರಿಂದ ಪ್ರೇರಣೆಗೊಂಡ ಬೈಕ್ ಸವಾರರು ಸ್ವಯಂಪ್ರೇರಿತವಾಗಿ ತಾವು ಧರಿಸಿದ್ದ 100ಕ್ಕೂ ಹೆಚ್ಚು ಹಾಫ್ ಹೆಲ್ಮೆಟ್ ಗಳನ್ನು ಟ್ರಾಫಿಕ್ ಪೊಲೀಸರಿಗೆ ನೀಡಿದರು. ದೋಷಪೂರಿತ ಸೈಲೆನ್ಸರ್, ಡಿಫೆಕ್ಟಿವ್ ನೇಮ್ ಪ್ಲೇಟ್ ಹಾಗೂ ಹಾಫ್ ಹೆಲ್ಮೆಟ್‌ಗಳನ್ನು ವಾಹನದ ಮೂಲಕ ನಾಶಪಡಿಸಲಾಯಿತು.