ಲಿಂಗಸುಗೂರಲ್ಲಿ ಆರೋಗ್ಯ ರಕ್ಷಣೆ ಕುರಿತು ಜಾಗೃತಿ ಅಭಿಯಾನ - ಲಿಂಗಸುಗೂರು ರಾಯಚೂರು ಲೆಟೆಸ್ಟ್ ನ್ಯೂಸ್
ದೇಶಾದ್ಯಂತ ಸಮಸ್ಯೆ ಸೃಷ್ಟಿಸಿದ ಕೊರೊನಾ ವೈರಸ್ ಕುರಿತು ಲಿಂಗಸುಗೂರಲ್ಲಿ ನಿನ್ನೆ ಆರೋಗ್ಯ ರಕ್ಷಣೆ ಕುರಿತು ಜಾಗೃತಿ ಅಭಿಯಾನ ನಡೆಸಲಾಯಿತು. ಜಿಲ್ಲೆಯಲ್ಲಿ ಕೊರೊನಾ ವೈರಸ್ ತಡೆಯುವುದೂ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡದಂತೆ ಜನತೆ ಸ್ವಯಂ ರಕ್ಷಣೆಗೆ ಮುಂದಾಗುವಂತೆ ಆರೋಗ್ಯ ಇಲಾಖೆ ಅಭಿಯಾನ ನಡೆಸಿತು. ಶುಕ್ರವಾರ ಕೋರ್ಟ್ ಆವರಣ ಮತ್ತು ಬಸ್ ನಿಲ್ದಾಣ ಅವರಣದಲ್ಲಿ ಕೊರೊನಾ ವೈರಸ್ ಹರಡುವಿಕೆ, ತಡೆಯಲು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಆರೋಗ್ಯ ಶಿಕ್ಷಣಾಧಿಕಾರಿ ಪ್ರಾಣೇಶ ಜೋಷಿ ಮಾಹಿತಿ ನೀಡಿದರು.