ಹಾವೇರಿ ಜಿಲ್ಲೆ ಕಲಾವಿದರಿಂದ ಕೊರೊನಾ ಬಗ್ಗೆ ಜಾಗೃತಿ - Awareness on Corona
ಹಾವೇರಿ: ಕೊರೊನಾ ವೈರಸ್ ನಿಗ್ರಹಿಸಲು ಹಲವು ಪ್ರಯೋಗಗಳು ನಡೆದಿವೆ. ಆದರೆ ಸದ್ಯದ ಸ್ಥಿತಿಯಲ್ಲಿ ರೋಗ ಬರದಂತೆ ತಡೆಯುವ ಏಕೈಕ ಮಾರ್ಗ ಎಂದರೆ ಸಾಮಾಜಿಕ ಅಂತರ. ಆದರೂ ಸಹ ಹಲವು ಜನ ಸಾಮಾಜಿಕ ಅಂತರಪಾಲಿಸುತ್ತಿಲ್ಲ. ಇಂತವರಿಗಾಗಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ ಹಾವೇರಿ ಜಿಲ್ಲೆಯ ಕಲಾವಿದರು. ರಾಣೆಬೆನ್ನೂರಿನ ಕಲಾವರ್ಗದ ನಾಮದೇವ ಕಾಗದಗಾರ ವ್ಯಂಗ್ಯಚಿತ್ರಗಳ ಮೂಲಕ ಕೊರೊನಾ ಕುರಿತಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಇನ್ನು ಹಾನಗಲ್ ತಾಲೂಕು ತಿಳವಳ್ಳಿ ಗ್ರಾಮದ ಚಿತ್ರಕಲಾ ಶಿಕ್ಷಕ ಸುನೀಲಕುಮಾರ್ ಪೆಂಟಿಂಗ್ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಇನ್ನು ಹಾವೇರಿಯ ಸಿರಿಧಾನ್ಯ ಕಲಾವಿದ ಗಣೇಶ ರಾಯ್ಕರ್ ಸಿರಿಧಾನ್ಯಗಳಲ್ಲಿ ಕೊರೊನಾ ಕುರಿತ ಜಾಗೃತಿ ಮೂಡಿಸಿದ್ದಾರೆ.