ಕರ್ನಾಟಕ

karnataka

ETV Bharat / videos

ಆಟೋರಿಕ್ಷಾ ಡಿಕ್ಕಿ: ವೃದ್ಧೆ ಸ್ಥಳದಲ್ಲೇ ಸಾವು - ಅಪಘಾತದಲ್ಲಿ ವೃದ್ಧೆ ಸಾವು

By

Published : Oct 12, 2019, 4:52 AM IST

ಬಳ್ಳಾರಿ: ತಾಲೂಕಿನ ಎತ್ತಿನಬೂದಿಹಾಳ್ ಗ್ರಾಮದ ಅಡ್ಡರಸ್ತೆಯಲ್ಲಿ ವೃದ್ಧೆಯೊಬ್ಬರಿಗೆ ಆಟೋರಿಕ್ಷಾ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಎತ್ತಿನ ಬೂದಿಹಾಳ್ ಅಡ್ಡರಸ್ತೆಯಲ್ಲಿರುವ ಹೊಲದಿಂದ ರಸ್ತೆಯ ಇಕ್ಕೆಲದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಗೆ ಬಳ್ಳಾರಿ ಮಾರ್ಗವಾಗಿ ಬರುತ್ತಿದ್ದ ಸರಕು ಸಾಗಣೆ ಆಟೋರಿಕ್ಷಾ ಬಂದು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮೃತಪಟ್ಟ ವೃದ್ಧೆಯನ್ನು ನೆರೆಯ ಆಂಧ್ರಪ್ರದೇಶದ ಬೊಮ್ಮನಹಾಳ್ ಮಂಡಲದ ದೇವಗಿರಿಯ ಹನುಮಕ್ಕ (60) ಎಂದು ಗುರುತಿಸ ಲಾಗಿದೆ. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.

ABOUT THE AUTHOR

...view details