ಜನತಾ ಕರ್ಫ್ಯೂಗೆ ಆಟೋ ಚಾಲಕರ ಬೆಂಬಲ : ನಾಳೆ ದಾವಣಗೆರೆಯಲ್ಲಿ ರಸ್ತೆಗಿಳಿಯಲ್ಲ ಆಟೋಗಳು - ಜನತಾ ಕರ್ಫ್ಯೂ ಜಾರಿ
ದಾವಣಗೆರೆ: ಕೊರೊನಾ ವೈರಸ್ ಭೀತಿ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ 'ಜನತಾ ಕರ್ಫ್ಯೂ'ಗೆ ಆಟೋ ಚಾಲಕರು ಬೆಂಬಲ ವ್ಯಕ್ತಪಡಿಸಿದ್ದು, ನಾಳೆ ಆಟೋಗಳು ರಸ್ತೆಗಿಳಿಯುವುದಿಲ್ಲ. ದಾವಣಗೆರೆ ತಾಲೂಕಿನಲ್ಲಿ ಒಟ್ಟು 30 ಆಟೋ ನಿಲ್ದಾಣಗಳಿದ್ದು, 12 ಸಾವಿರ ಆಟೋಗಳಿವೆ, ಅವ್ಯಾವು ನಾಳೆ ಸಂಚರಿಸುವುದಿಲ್ಲ. ಅನಿವಾರ್ಯ ಹಾಗೂ ತುರ್ತು ಪರಿಸ್ಥಿತಿ ಇದ್ದರೆ ಮಾತ್ರ ಆಟೋಗಳು ರಸ್ತೆಗಿಳಿಯಲಿವೆ. ಕೊರೊನಾ ಮಹಾಮಾರಿ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮ ಸರಿಯಾಗಿದೆ ಎಂದು ಆಟೋ ಚಾಲಕರ ತಾಲೂಕು ಘಟಕದ ಅಧ್ಯಕ್ಷ ಅಣ್ಣಪ್ಪ ಸ್ವಾಮಿ 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.