ಮೈಸೂರಿನಲ್ಲಿ ವೀಕೆಂಡ್ ಕರ್ಫ್ಯೂ : ಪ್ರಯಾಣಿಕರಿಲ್ಲದೆ ಆಟೋ ಚಾಲಕರು ಕಂಗಾಲು - ವೀಕೆಂಡ್ ಕರ್ಫ್ಯೂ
ಮೈಸೂರು : ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವುದರಿಂದ ರಾಜ್ಯದ 12 ಜಿಲ್ಲೆಗಳಲ್ಲಿ ಸರ್ಕಾರ ವಾರಾಂತ್ಯದ ಕರ್ಫ್ಯೂಗೆ ಆದೇಶ ಮಾಡಿದೆ. ಹಾಗಾಗಿ, ಮೈಸೂರು ನಗರ ಸಂಪೂರ್ಣ ಬಂದ್ ಆಗಿದ್ದು, ರಸ್ತೆಗಳು ಬೀಕೋ ಅನ್ನುತ್ತಿವೆ. ಕರ್ಫ್ಯೂ ಇದ್ದರೂ ನಗರ ಸಾರಿಗೆ ಬಸ್ಗಳ ಸಂಚಾರಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಆದರೆ, ಬಸ್ಗಳು ಇದ್ದರೂ ಬಸ್ ನಿಲ್ದಾಣಗಳತ್ತ ಬರುವವರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಬಸ್ ಪ್ರಯಾಣಿಕರನ್ನೇ ನಂಬಿ ಜೀವನ ಸಾಗಿಸುತ್ತಿರುವ ಆಟೋ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.