ಪ್ಲಾಸ್ಟಿಕ್ ಮಾರಾಟಗಾರರ ಮೇಲೆ ದಾಳಿ... ಪ್ರಕರಣ ದಾಖಲು - ಪುರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬ್ಯಾನ್
ಹಸಿರು ನ್ಯಾಯಾಲಯದ ಆದೇಶದ ಮೇರೆಗೆ ಪುರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬ್ಯಾನ್ ಮಾಡಿ ತಿಂಗಳುಗಳೇ ಕಳೆದಿದ್ದರೂ, ಪ್ಲಾಸ್ಟಿಕ್ ವ್ಯಾಪಾರ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ಅದರಂತೆ ಪಟ್ಟಣದ ಶಿವಸಾಯಿ ಅಂಗಡಿ ಮತ್ತು ವೋವೇಶ್ನರಿ ಅಂಗಡಿಯವರು ಗ್ರಾಹಕರಿಗೆ ನೀಡುತ್ತಿದ್ದ ಪ್ಲಾಸ್ಟಿಕ್ ಅನ್ನು ವಶಪಡಿಸಿಕೊಂಡ ಪುರಸಭಾ ಮುಖ್ಯಾಧಿಕಾರಿ ನವೀನ್ ಚಂದ್ರ ಇವರಿಬ್ಬರ ಮೇಲೆ ಪ್ರಕರಣ ದಾಖಲಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.