ಕರ್ನಾಟಕ

karnataka

ETV Bharat / videos

ದೇಶದ್ರೋಹ ಘೋಷಣೆ ಪ್ರಕರಣ: ಅಮೂಲ್ಯ ಮನೆ ಮೇಲೆ ಯುವಕರಿಂದ ದಾಳಿ, ಕಿಟಕಿ ಗಾಜುಗಳು ಪುಡಿ

By

Published : Feb 21, 2020, 8:12 AM IST

ಚಿಕ್ಕಮಗಳೂರು: ದೇಶದ್ರೋಹದ ಘೋಷಣೆ ಕೂಗಿರುವ ಅಮೂಲ್ಯ ಲಿಯೋನ್​ ವಿರುದ್ದ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಚಿಕ್ಕಮಗಳೂರಿನ ಆಕೆಯ ನಿವಾಸದ ಮೇಲೆ ಕೆಲ ಯುವಕರು ದಾಳಿ ಮಾಡಿದ್ದು, ಮನೆಯ ಗಾಜುಗಳ ಪುಡಿಪುಡಿಯಾಗಿದೆ. ಈ ಬಗ್ಗೆ ಮಾಹಿತಿ ತಿಳಿಯತ್ತಿದ್ದಂತೆ ಸ್ಥಳಕ್ಕಾಗಮಿಸಿದ ಕೊಪ್ಪ ಪೊಲೀಸರು ಮುಂಜಾಗೃತಾ ಕ್ರಮವಾಗಿ ಅಮೂಲ್ಯ ತಂದೆ ವಾಜಿ ಅವರಿಗೆ ಪೊಲೀಸ್ ಠಾಣೆಯಲ್ಲೇ ರಕ್ಷಣೆ ನೀಡಿದ್ದಾರೆ. ಈಗಾಗಲೇ ಹತ್ತಕ್ಕೂ ಹೆಚ್ಚು ಪೊಲೀಸರು ಅವರ ಮನೆಯ ಬಳಿ ಠಿಕಾಣಿ ಹೂಡಿದ್ದು ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಈ ಬಗ್ಗೆ ನಮ್ಮ ಚಿಕ್ಕಮಗಳೂರು ಪ್ರತಿನಿಧಿ ರಾಜ್‌ಕುಮಾರ್ ವಿಸ್ತೃತ ವರದಿ ನೀಡಿದ್ದಾರೆ.

ABOUT THE AUTHOR

...view details