ರಂಗೇರಿದ ಅಥಣಿ ಚುನಾವಣಾ ಅಖಾಡ: ಕೆಜೆಪಿ ಅಭ್ಯರ್ಥಿ ವಿನಾಯಕ ಭರ್ಜರಿ ಪ್ರಚಾರ - ಕೆಜೆಪಿ ಅಭ್ಯರ್ಥಿ ವಿನಾಯಕ ಮಠಪತಿ ಲೆಟೆಸ್ಟ್ ನ್ಯೂಸ್
ಅಥಣಿ: ಅಥಣಿ ಉಪ ಚುನಾವಣಾ ಕಣ ರಂಗೇರಿದ್ದು, ಅಭ್ಯರ್ಥಿಗಳು ಅಬ್ಬರದಿಂದ ಮತ ಪ್ರಚಾರದಲ್ಲಿ ತೊಡಗಿದ್ದಾರೆ. ಇನ್ನು ಈ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ವಿನಾಯಕ ಮಠಪತಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ತಾಲೂಕಿನ ಕವಟಕೊಪ್ಪ, ಅವರಕೋಡ, ಶೇಗುಣಸಿ, ದರೂರ, ಶಂಕ್ರಟ್ಟಿ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ವಿನಾಯಕ ಮಠಪತಿ ಯುವಪಡೆ ಕಟ್ಟಿಕೊಂಡು ಪ್ರಚಾರ ಕಾರ್ಯ ಕೈಗೊಂಡಿದ್ದರು. ಒಟ್ಟಿನಲ್ಲಿ ಅಥಣಿ ವಿಧಾನಸಭೆ ಉಪ ಚುನಾವಣೆ ರಂಗು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮತದಾರ ಯಾರಿಗೆ ಆಶೀರ್ವಾದ ಮಾಡುತ್ತಾನೆ ಎಂಬುದನ್ನು ಕಾದು ನೋಡಬೇಕು.