ಬೆಂಗಳೂರು ಯುವಕರಿಂದ ಎದೆ ಝಲ್ಲೆನಿಸೋ ಬೈಕ್ ರೇಸ್, ವ್ಹೀಲಿಂಗ್: ಅಮಾಯಕ ಜೀವಗಳ ಜೊತೆ ಚೆಲ್ಲಾಟ! - undefined
ನೆಲಮಂಗಲ: ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಯುವಕರ ಬೈಕ್ ರೇಸ್ ಆರ್ಭಟ ಜೋರಾಗಿದೆ. ರಾತ್ರಿ ವೇಳೆಗೆ ಹೆದ್ದಾರಿಗೆ ಬೈಕ್ ಇಳಿಸುವ ಪುಂಡರು ಅಪಾಯಕಾರಿ ಬೈಕ್ ಸ್ಟಂಟ್ ಮತ್ತು ರೇಸ್ ಮೂಲಕ ಅಮಾಯಕ ಜೀವಗಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಯಮವೇಗದಲ್ಲಿ ಬೈಕ್ ರೇಸ್ ಹಾಗೂ ಅಪಾಯಕಾರಿ ವ್ಹೀಲಿಂಗ್ ಮಾಡೋ ಮೂಲಕ ಸಾರ್ವಜನಕರಲ್ಲಿ ಆತಂಕ ಮೂಡಿಸಿದ್ದಾರೆ. ಬೈಕ್ ಸ್ಟಂಟ್ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಕ್ಕೂ ಅಪ್ಲೋಡ್ ಮಾಡೋ ಹುಚ್ಚು ಚಾಳಿ ಇವರಿಗಿದೆ. ಪೊಲೀಸರು ಈ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಸಾಮಾನ್ಯ ಜನರಿಗೆ ಅಪಾಯವಾಗುವ ಸಾಧ್ಯತೆ ಇದೆ.