"ದೀಪ ನಮ್ಮ ಮನೆಯದ್ದು ಅಂತಾ ಮುತ್ತು ಕೊಟ್ಟರೆ ನಮ್ಮ ತುಟಿಯೇ ಸುಡುತ್ತದೆ": ಬಿಜೆಪಿ ಶಾಸಕ - ಬೆಂಗಳೂರು
ಬೆಂಗಳೂರು: ನಮ್ಮ ಹತ್ರ ದೀಪ ಇದೆ ಅಂತಾ ಮುತ್ತು ಕೊಡೋದಕ್ಕೆ ಆಗುತ್ತಾ?. ಮುತ್ತು ಕೊಟ್ಟರೆ ನಮ್ಮ ತುಟಿಯೇ ಸುಡುತ್ತದೆ ಎಂದು ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ್ ಸರ್ಕಾರದ ಬಗ್ಗೆ ವ್ಯಂಗ್ಯವಾಡಿದರು. ವಿಧಾನಸಭೆಯಲ್ಲಿ ಇಂದು ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡುತ್ತಿದ್ದ ಬಿಜೆಪಿ ಶಾಸಕ ಸಿದ್ದು ಸವದಿ, ನೇಕಾರರು ಸಂಕಷ್ಟದಲ್ಲಿ ಇದ್ದಾರೆ. ಅವರಿಗೆ ಸೂಕ್ತ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು. ಈ ವೇಳೆ ಸಭಾಧ್ಯಕ್ಷರ ಪೀಠದಲ್ಲಿ ಕುಳಿತಿದ್ದ ಉಪಾಧ್ಯಕ್ಷ ಆನಂದ್ ಮಾಮನಿ ಅವರು ಮಧ್ಯ ಪ್ರವೇಶಿಸಿ ನೀವು ಆಡಳಿತ ಪಕ್ಷದವರು. ಬಜೆಟ್ ಪರವಾಗಿ ಮಾತನಾಡಬೇಕು ಎಂದರು. ಇದಕ್ಕೆ ಉತ್ತರ ನೀಡಿದ ಶಾಸಕ ದೊಡ್ಡನಗೌಡ ಪಾಟೀಲ್, ಮನೆ ದೀಪಕ್ಕೆ ಮುತ್ತು ಕೊಟ್ಟರೆ ತುಟಿ ಸುಡಲ್ವಾ? ಆಡಳಿತ ಪಕ್ಷ ಆದರೇನು, ವಿರೋಧ ಪಕ್ಷ ಆದರೇನು? ಸಮಸ್ಯೆಗಳ ಬಗ್ಗೆ ಗಮನ ಸೆಳೆಯಬೇಕು ಎಂದರು.