ಚರ್ಚೆ ವೇಳೆ ಸದನದಲ್ಲಿ ಭಾರಿ ಗಲಾಟೆ... ಶಾಸಕ ಸಂಗಮೇಶ್ ವಿರುದ್ಧ ಸ್ಪೀಕರ್ ಗರಂ - ಸ್ಪೀಕರ್ ಕಾಗೇರಿ ಸುದ್ದಿ
ಒನ್ ನೇಷನ್, ಒನ್ ಎಲೆಕ್ಷನ್ ಚರ್ಚೆ ವೇಳೆ ಸದನದಲ್ಲಿ ಭಾರಿ ಗಲಾಟೆ ನಡೆದಿದ್ದು, ಶಾಸಕ ಸಂಗಮೇಶ್ ವಿರುದ್ಧ ಸ್ಪೀಕರ್ ಗರಂ ಆದರು. ಪ್ರತಿಪಕ್ಷದ ಸದಸ್ಯ ಸಂಗಮೇಶ್ ವಿರುದ್ಧ ಸ್ಪೀಕರ್ ಅಸಮಾಧಾನ ವ್ಯಕ್ತಪಡಿಸಿದರು. ಸದನದಲ್ಲಿ ಸರಿಯಾಗಿ ನಡೆದುಕೊಳ್ಳುವಂತೆ ಶಾಸಕ ಸಂಗಮೇಶ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಾರ್ನ್ ಮಾಡಿದರು. ಬಳಿಕ ಪ್ರತಿಪಕ್ಷ ನಾಯಕರ ವಿರೋಧಕ್ಕೆ ಗರಂ ಆದ ಸಭಾಧ್ಯಕ್ಷರು 15 ನಿಮಿಷ ಕಲಾಪ ಮುಂದೂಡಿ ಸಿಟ್ಟಿನಿಂದಲೇ ಪೀಠದಿಂದ ಹೊರ ನಡೆದರು.