ಕೋಲಾರದಲ್ಲಿ ಪೌರಕಾರ್ಮಿಕನ ಮೇಲೆ ಹಲ್ಲೆ: ದೂರು ದಾಖಲು - ಪೌರ ಕಾರ್ಮಿಕನ ಮೇಲೆ ಹಲ್ಲೆ
ಪಾದರಾಯನಪುರ ಘಟನೆ ಬೆನ್ನಲ್ಲೇ ಪೌರಕಾರ್ಮಿಕನ ಮೇಲೆ ಹಲ್ಲೆ ನಡೆಸಿರುವ ಘಟನೆ ನಗರದ 23 ನೇ ವಾರ್ಡ್ನಲ್ಲಿ ನಡೆದಿದೆ. ಮುನಿಯಪ್ಪ ಹಲ್ಲೆಗೊಳಗಾಗಿರುವ ಪೌರ ಕಾರ್ಮಿಕ. ತನ್ನ ಮೇಲೆ 23ನೇ ವಾರ್ಡ್ನ ನಗರಸಭಾ ಸದಸ್ಯೆಯ ಪತಿ ಸಾಧಿಕ್ ಪಾಷಾ ಎಂಬಾತ ಯುಜಿಡಿ ಕ್ಲೀನ್ ಮಾಡಲು ತಡವಾಗಿ ಹೋಗಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾನೆ ಎಂದು ಕಾರ್ಮಿಕ ಆರೋಪಿಸಿದ್ದಾನೆ. ಈ ಪೌರ ಕಾರ್ಮಿಕನ ಮೇಲೆ ಹಲ್ಲೆ ಮಾಡಿರುವುದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಕೋಲಾರ ನಗರ ಪೊಲೀಸ್ ಠಾಣೆಗೆ ಪೌರ ಕಾರ್ಮಿಕ ಮುನಿಯಪ್ಪ ದೂರು ನೀಡಿದ್ದಾನೆ.