ಜೊಯಿಡಾ: ಮಾಜಿ ಸೈನಿಕನ ಮೇಲೆ ಹಲ್ಲೆ ಆರೋಪ, ಪ್ರಕರಣ ದಾಖಲು - karawara latest news
ಕಾರವಾರ: ಹೋಂ ಸ್ಟೇಗೆ ದಾರಿ ಮಾಡುತ್ತಿದ್ದ ವೇಳೆ ಜಗಳ ನಡೆದು ಕುಟುಂಬವೊಂದು ಮಾಜಿ ಸೈನಿಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಜೊಯಿಡಾ ತಾಲೂಕಿನ ಬೀರಂಪಾಲಿಯಲ್ಲಿ ಕೇಳಿಬಂದಿದೆ. ಬೀರಂಪಾಲಿಯ ಶಿವಾಜಿ ಹಲ್ಲೆಗೊಳಗಾದ ಮಾಜಿ ಸೈನಿಕ. ಇವರು ಬೀರಂಪಾಲಿಯಲ್ಲಿ ನಿರ್ಮಿಸಿದ್ದ ಹೋಂ ಸ್ಟೇಗೆ ದಾರಿ ಮಾಡಿಕೊಳ್ಳಲು ಮುಂದಾಗಿದ್ದಾಗ ಅದೇ ಪ್ರದೇಶದಲ್ಲಿ ಕಳೆದ ಹತ್ತಾರು ವರ್ಷಗಳಿಂದ ಕೃಷಿ ಮಾಡಿಕೊಂಡಿದ್ದ ಗೌಳಿ ಸಮುದಾಯದ ಕುಟುಂಬವೊಂದರ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಆದರೂ ಅದೇ ಜಾಗದಲ್ಲಿ ರಸ್ತೆ ಮಾಡಲು ಮುಂದಾದಾಗ ಗೌಳಿ ಸಮುದಾಯದ ಕುಟುಂಬದ ಸದಸ್ಯರು ಹಲ್ಲೆ ನಡೆಸಿದ್ದಾರೆಂದು ಆರೋಪ ಕೇಳಿ ಬಂದಿದೆ. ಹಲ್ಲೆಗೊಳಗಾಗಿ ಗಾಯಗೊಂಡಿರುವ ಮಾಜಿ ಸೈನಿಕ ಆಸ್ಪತ್ರೆಗೆ ದಾಖಲಾಗಿದ್ದು, ಹಲ್ಲೆ ಹಾಗೂ ಕೊಲೆ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ 12 ಜನರ ಮೇಲೆ ದೂರು ದಾಖಲಿಸಿದ್ದಾರೆ. ಈ ಬಗ್ಗೆ ದಾಂಡೇಲಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.