ನೀರು ಕೇಳುವ ನೆಪವಷ್ಟೇ! ಆಕೆ ಕದ್ದದ್ದು ಬರೋಬ್ಬರಿ 5 ಕೆ.ಜಿ 250 ಗ್ರಾಂ ಬಂಗಾರ! - ಕಲಬುರಗಿ ಅಪರಾಧ ಸುದ್ದಿ
ಬರೋಬ್ಬರಿ 5 ಕೆ.ಜಿ 250 ಗ್ರಾಂ ಬಂಗಾರ ಹಾಗು 2.62 ಲಕ್ಷ ರೂ ಮೌಲ್ಯದ ಬೆಳ್ಳಿ ಕಳ್ಳತನ ಮಾಡಿದ ಖತರ್ನಾಕ್ ಕಳ್ಳಿಯನ್ನು ಕಲಬುರಗಿಯ ಎಂ.ಬಿ.ನಗರ ಠಾಣೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಫರತಾಬಾದ್ ಗ್ರಾಮದ ಬಸಮ್ಮ ನಂದಿಕೂರ ಬಂಧಿತ ಆರೋಪಿಯಾಗಿದ್ದು, ನೀರು ಕೇಳುವ ನೆಪದಲ್ಲಿ ಬಾಗಿಲು ಬಡಿಯುವ ಈಕೆ ಖಾಲಿ ಇರುವ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದುದು ತನಿಖೆ ವೇಳೆ ಗೊತ್ತಾಗಿದೆ.