ಮಳೆ ಇಲ್ಲದೆ ಕಂಗಾಲಾದ ರೈತರಿಗೆ ಸೈನಿಕ ಹುಳುಗಳ ಕಾಟ: ನೆಲಕಚ್ಚಿದ ಮೆಕ್ಕೆಜೋಳ ಬೆಳೆ - ಸೈನಿಕ ಹುಳುವಿನ ಕಾಟ
ಮಳೆ ಇಲ್ಲದೆ ಕಂಗಾಲಾಗಿದ್ದ ರೈತರಿಗೆ ಇದೀಗ ಮತ್ತೊಂದು ಸಂಕಷ್ಟ ಬಂದೊದಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿರುವ ಚಿತ್ರದುರ್ಗದ ರೈತರು ಅಲ್ಪಸ್ವಲ್ಪ ಮಳೆಯಲ್ಲೇ ಮೆಕ್ಕೆಜೋಳ ಬಿತ್ತಿದ್ದರು. ಅದ್ರೆ ಮೆಕ್ಕೆಜೋಳ ಬೆಳೆ ಕೀಟ ಬಾಧೆಯಿಂದ ಇದೀಗ ನೆಲ ಕಚ್ಚುವ ಹಂತ ತಲುಪಿದೆ. ನೂರಾರು ಎಕರೆ ಮೆಕ್ಕೆಜೋಳ ಬೆಳೆ ಪೈರು ಹೊಡೆಯುವ ಮೊದಲೇ ಸಂಪೂರ್ಣವಾಗಿ ಹಾಳಾಗಿದ್ದು, ರೈತರು ಸದಾ ಕಣ್ಣೀರಿನಲ್ಲಿ ಕೈ ತೊಳೆಯುವ ಪರಿಸ್ಥಿತಿ ನಿರ್ಮಾಣ ಆಗಿದೆ.