ಮಹಾಮಳೆಗೆ ಮೈದುಂಬಿ ಹರಿಯುತ್ತಿರುವ ಅರ್ಕಾವತಿ ನದಿ - ಬೆಂಗಳೂರು ಮಳೆ ಸುದ್ದಿ
ನಿನ್ನೆ ಸುರಿದ ಭಾರಿ ಮಳೆಗೆ ಬೆಂಗಳೂರು ತತ್ತರಿಸಿದ್ದು ಒಂದು ಕಡೆಯಾದರೆ, ಇತ್ತ ನೆಲಮಂಗಲದ ಅರ್ಕಾವತಿ ನದಿ ಮೈ ದುಂಬಿ ಹರಿಯುತ್ತಿದೆ. ನಿನ್ನೆಯ ವ್ಯಾಪಕ ಮಳೆಗೆ ಬೆಂಗಳೂರು ಉತ್ತರ ತಾಲೂಕಿನ ಆಲೂರು ಹಾಗೂ ಕುದುರೆಗೆರೆ ಸಂಪರ್ಕ ರಸ್ತೆ ಸ್ಥಗಿತಗೊಂಡಿದೆ. ಇನ್ನು ಅರ್ಕಾವತಿ ನದಿ ಹರಿಯುವಿಕೆಯನ್ನು ಕಂಡು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಕೊಳಚೆ ನೀರಿನಿಂದ ಹರಿಯುತ್ತಿದ್ದ ಅರ್ಕಾವತಿ ಮೊದಲ ಬಾರಿ ಮಳೆ ನೀರಿನಿಂದ ತುಂಬಿದೆ. ನದಿಯ ಹರಿಯುವಿಕೆ ದೃಶ್ಯವನ್ನ ಜನ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಆನಂದಿಸಿದರು.