ಧಾರವಾಡ: ಬಂದ್ ವೇಳೆ ಹೋರಾಟಗಾರರ ನಡುವೆ ವಾಗ್ವಾದ - ಭಾರತ್ ಬಂದ್ಗೆ ಧಾರವಾಡದಲ್ಲಿ ಬೆಂಬಲ
ಇಂದಿನ ಭಾರತ್ ಬಂದ್ ಹೋರಾಟದ ಮಧ್ಯೆ ಭಿನ್ನಾಭಿಪ್ರಾಯ ಕಂಡುಬಂದ ಘಟನೆ ಧಾರವಾಡ ಜುಬ್ಲಿ ವೃತ್ತದಲ್ಲಿ ನಡೆದಿದೆ. ಕಾಂಗ್ರೆಸ್ ಮುಖಂಡನ ಭಾಷಣದ ವೇಳೆ ವಾಗ್ವಾದ ನಡೆದಿದೆ. ಕಾಂಗ್ರೆಸ್ ಮುಖಂಡ ಪಿ.ಎಚ್. ನೀರಲಕೇರಿ ಅವರು ತಮ್ಮ ಭಾಷಣದಲ್ಲಿ ಸಂಜೆ 7 ಗಂಟೆವರೆಗೆ ಬಂದ್ ಇದೆ ಎಂದು ಹೇಳುತ್ತಿದ್ದಂತೆ, ಹೋರಾಟಗಾರ ವೆಂಕನಗೌಡ ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಈ ವೇಳೆ ನೀರಲಕೇರಿ ತಮ್ಮ ಭಾಷಣ ಮೊಟಕೊಗೊಳಿಸಿ ನಮ್ಮ ವೇದಿಕೆಯನ್ನು ರಾಜಕೀಕರಣಗೊಳಿಸಬೇಡಿ ಅಂತಾ ವಾಗ್ವಾದ ನಡೆಸಿದ್ದಾರೆ. ಬಳಿಕ ಮತ್ತೆ ತಮ್ಮ ಭಾಷಣ ಮುಂದುವರಿಸಿ ಎಂದು ಮನವಿ ಮಾಡಿಕೊಂಡ ಮೇಲೆ ಮಾತು ಮುಂದುವರಿಸಿದ್ದಾರೆ.