ಪ್ರಸ್ತುತ ಶಿಕ್ಷಣದ ಸಾಧಕ-ಭಾದಕದ ಕುರಿತು ಶಿಕ್ಷಣ ಚಿಂತಕರ ಮಾತು - ಶಿಕ್ಷಣ ಚಿಂತಕ ಅರವಿಂದ ಚೊಕ್ಕಾಡಿ
ಬೆಳ್ತಂಗಡಿ: ಕೇಂದ್ರದ ಹೊಸ ಶಿಕ್ಷಣ ನೀತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ಸಾಧ್ಯವಾಗಲಿದೆಯೇ? ಈ ಶಿಕ್ಷಣ ನೀತಿ ವಿದ್ಯಾರ್ಥಿಗಳಿಗೆ ಯಾವ ರೀತಿ ಸಹಕಾರಿಯಾಗಲಿದೆ. ಪ್ರಸಕ್ತ ವರ್ಷದಲ್ಲಿ ಶಾಲೆ ಆರಂಭವಾದ ಬಳಿಕ ವಿದ್ಯಾರ್ಥಿಗಳಿಗೆ 45% ಪಠ್ಯ ಕಡಿತ ಮಾಡಲಾಗುತ್ತದೆ ಎಂದು ಸರ್ಕಾರ ಹೇಳುತ್ತಿದ್ದು, ಇದರಿಂದ ಉಂಟಾಗುವ ಪರಿಣಾಮಗಳೇನು? ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಪಿಯುಸಿ ಹಂತದ ಬಳಿಕ ಇಂಗ್ಲಿಷ್ ಸುಧಾರಿಸುವ ಬಗೆ ಹೇಗೆ ಹಾಗೂ ಈಗಿನ ಆನ್ಲೈನ್ ತರಗತಿಗಳು ಮಕ್ಕಳಿಗೆ ಎಷ್ಟು ಪರಿಣಾಮಕಾರಿ ಎಂಬೆಲ್ಲಾ ವಿಚಾರದ ಬಗ್ಗೆ ಸಾಹಿತಿ, ಶಿಕ್ಷಣ ಚಿಂತಕ ಹಾಗೂ ಪ್ರಸ್ತುತ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಅರವಿಂದ ಚೊಕ್ಕಾಡಿಯವರು ಈಟಿವಿ ಭಾರತದೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.