ಸರಳವಾಗಿ ನೆರವೇರಿದ ಅರಸೀಕೆರೆ ಪ್ರಸನ್ನ ಗಣಪತಿ ನಿಮಜ್ಜನ - ಅರಸೀಕೆರೆ ಗಣೇಶ ನಿಮಜ್ಜನ
🎬 Watch Now: Feature Video
ಹಾಸನ: (ಅರಸೀಕೆರೆ): ಅರಸೀಕೆರೆ ಶ್ರೀ ಪ್ರಸನ್ನ ಗಣಪತಿ ಸ್ವಾಮಿಯ 79ನೇ ವರ್ಷದ ಮಹೋತ್ಸವವು ಶನಿವಾರ ಸರಳವಾಗಿ ಮುಕ್ತಾಯವಾಯಿತು. ನಗರದ ಗಣಪತಿ ಪೆಂಡಲ್ನಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನನ್ನು ಸರಳ ಅಲಂಕಾರ ಹಾಗೂ ಮಂಗಳ ವಾದ್ಯದೊಡನೆ ಟ್ರ್ಯಾಕ್ಟರ್ನಲ್ಲಿ ಕಂತೇನಹಳ್ಳಿ ದೊಡ್ಡಕೆರೆಗೆ ತಂದು ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಕೊರೊನಾ ಹಿನ್ನೆಲೆ ಹೆಚ್ಚು ದಿನಗಳ ಕಾಲ ಪ್ರತಿಷ್ಠಾಪನೆಗೆ ಅವಕಾಶವಿಲ್ಲದ್ದರಿಂದ ಏಳು ದಿನಗಳ ಬಳಿಕವೇ ನಿಮಜ್ಜನ ಕಾರ್ಯ ನಡೆಯಿತು. ಕೊರೊನಾ ಪಾಸಿಟಿವ್ ಹಿನ್ನೆಲೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮೊದಲ ಬಾರಿಗೆ ಗಣಪತಿ ನಿಮಜ್ಜನದಲ್ಲಿ ಪಾಲ್ಗೊಂಡಿರಲಿಲ್ಲ.