ಕರ್ನಾಟಕ

karnataka

ETV Bharat / videos

ಐಮ್ಯಾಕ್ ಪ್ರೊ ಬೇಸ್ ಮಾದರಿಗಳ ಮಾರಾಟ ನಿಲ್ಲಿಸಲಿರುವ ಆ್ಯಪಲ್​! - iMac Pro base models

By

Published : Mar 8, 2021, 8:53 AM IST

ನವದೆಹಲಿ: ಅಮೆರಿಕದ ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿ 'ಆ್ಯಪಲ್' ಹೊಸ ಐಮ್ಯಾಕ್‌ಗಳನ್ನು ಶೀಘ್ರದಲ್ಲೇ ಪ್ರಾರಂಭಿಸಲಿದ್ದು, ಹಳೆಯ ಐಮ್ಯಾಕ್ ಪ್ರೊ ಬೇಸ್ ಮಾದರಿಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸಲಿದೆ. ದಿ ವರ್ಜ್ ಪ್ರಕಾರ, ಕಂಪನಿಯು ಪ್ರಸ್ತುತ ಲಭ್ಯವಿರುವ ಐಮ್ಯಾಕ್ ಮಾದರಿಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸಲಿದೆ. ಏಕೆಂದರೆ ಆ್ಯಪಲ್ ಸ್ಟೋರ್​ನ ಅಧಿಕೃತ ವೆಬ್​​ಸೈಟ್​ನಲ್ಲಿ ಕಾನ್ಫಿಗರೇಶನ್‌ನೊಂದಿಗೆ ಉತ್ಪನ್ನಗಳ ಬೆಲೆ 4,999 ಯುಎಸ್​ಡಿ ಎಂದು ಟ್ಯಾಗ್ ಮಾಡಲಾಗಿದೆ. ಒಮ್ಮೆ ಬೇಸ್ ಮಾದರಿಯ ಸರಬರಾಜು ಮುಗಿದರೆ, ಮತ್ತೆ ಐಮ್ಯಾಕ್ ಪ್ರೊ ಮಾರುಕಟ್ಟೆಯಲ್ಲಿ ಲಭ್ಯವಿರುವುದಿಲ್ಲ ಎಂದು ಆ್ಯಪಲ್​ ಕಂಪನಿ ದಿ ವರ್ಜ್‌ಗೆ ದೃಢಪಡಿಸಿದೆ. ಆದಾಗ್ಯೂ ಅಮೆಜಾನ್‌ನಂತಹ ಮೂರನೇ ವ್ಯಕ್ತಿಗಳು ಇನ್ನೂ ಉತ್ಪನ್ನದೊಂದಿಗೆ ಉಳಿದಿರಬಹುದು. ಕಂಪನಿಯು ಮರುವಿನ್ಯಾಸಗೊಳಿಸಲಾದ ಐಮ್ಯಾಕ್ ಮಾದರಿಯನ್ನು ಈ ವರ್ಷದಲ್ಲೇ ಪರಿಚಯಿಸುವ ನಿರೀಕ್ಷೆಯಿದೆ.

ABOUT THE AUTHOR

...view details