ಗಬ್ಬೂರು ತಾಲೂಕು ಕೇಂದ್ರ ರಚನೆಗೆ ಆಗ್ರಹ: ಕಾಲ್ನಡಿಗೆ ಜಾಥಾ ಮೂಲಕ ಜಿಲ್ಲಾಧಿಕಾರಿಗೆ ಮನವಿ - Raichuru latest news
ರಾಯಚೂರು ಜಿಲ್ಲೆಯ ಗಬ್ಬೂರು ಹೋಬಳಿ ಕೇಂದ್ರವನ್ನು ನೂತನ ತಾಲೂಕು ಕೇಂದ್ರ ಮಾಡುವಂತೆ ಆಗ್ರಹಿಸಿ ಗಬ್ಬೂರು ತಾಲೂಕು ರಚನೆ ಹೋರಾಟ ಸಮಿತಿಯಿಂದ ಬೃಹತ್ ಕಾಲ್ನಡಿಗೆ ಜಾಥಾ ನಡೆಸಲಾಯಿತು. ಗಬ್ಬೂರಿನಿಂದ ಜಿಲ್ಲಾಧಿಕಾರಿ ಕಚೇರಿವರಗೆ ಬೃಹತ್ ಕಾಲ್ನಡಿಗೆ ಜಾಥಾ ನಡೆಯಿತು. ಗಬ್ಬೂರು ಹೋಬಳಿ ಕೇಂದ್ರವು ತಾಲೂಕು ಕೇಂದ್ರವಾಗಲು ಅರ್ಹತೆ ಹೊಂದಿದೆ. ಈ ಹೋಬಳಿ ಕೇಂದ್ರದ ವ್ಯಾಪ್ತಿಗೆ 40ರಿಂದ 60 ಹಳ್ಳಿಗಳು ಬರುತ್ತವೆ. ಇದು ದೇವದುರ್ಗ ತಾಲೂಕಿನ ಅತಿ ಹೆಚ್ಚು ಕರ ಕಟ್ಟುವ ಕೇಂದ್ರವಾಗಿದೆ. ಅಲ್ಲದೆ 97 ಸಾವಿರ ಎಕರೆ ನೀರಾವರಿ ಹೊಂದಿರುವ ಫಲವತ್ತಾದ ಜಮೀನು ಸಹ ಹೊಂದಿದ್ದು, ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳು ಹಾದು ಹೋಗಿವೆ. ಹೀಗಾಗಿ ಗಬ್ಬೂರು ಹೋಬಳಿಯನ್ನ ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿ, ಸರ್ಕಾರ ಅಭಿವೃದ್ಧಿಗೆ ಮುಂದಾಗಬೇಕೆಂದು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಹೋರಾಟ ಸಮಿತಿ ಮನವಿ ಪತ್ರ ರವಾನಿಸಿತು.