ಗೋ ಹತ್ಯೆ ನಿಷೇಧ ಕಾಯ್ದೆಯಿಂದ ರೈತರಿಗೆ ಹಿಂಸೆ: ನಾಗೇಶ್ ಹೆಗಡೆ
ಚಾಮರಾಜನಗರ: ಗೋ ಹತ್ಯೆ ನಿಷೇಧ ಕಾಯ್ದೆಯಿಂದ ರೈತರಿಗೆ ಹಿಂಸೆಯಾಗಲಿದೆ ಎಂದು ಖ್ಯಾತ ಪರಿಸರವಾದಿ ನಾಗೇಶ್ ಹೆಗಡೆ ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಮುದಿ ಗೋವುಗಳನ್ನು ರೈತರು ಏನು ಮಾಡಬೇಕು. ಅವನ್ನು ಮಾರಲು ಪೊಲೀಸರ ಹತ್ತಿರ ಅಲೆಯಬೇಕಾ ಎಂದು ಪ್ರಶ್ನಿಸಿದ್ದಾರೆ. ಈ ಕಾಯ್ದೆಯಿಂದ ರೈತರಿಗೆ ಹಿಂಸೆ, ಅನ್ಯಾಯ ಆಗಲಿದೆಯೇ ಹೊರತು ಉಪಯೋಗವಿಲ್ಲ. ಮುದಿ ಹಸುಗಳು ಬಿಡಾಡಿ ದನಗಳಾಗಿ ಉತ್ತರಪ್ರದೇಶದಂತೆ ರಸ್ತೆ-ರಸ್ತೆಗಳಲ್ಲಿ ಬಂದು ನಿಲ್ಲುತ್ತವೆ. ಆಹಾರಕ್ಕಾಗಿ ಪರದಾಡುತ್ತವೆ. ಈ ಕಾಯ್ದೆಯಿಂದ ಕೈಗಾರಿಕೆಗಳಿಗೆ, ರೈತರಿಗೆ ಹಾನಿ ಆಗಲಿದೆ ಎಂದು ಅವರು ಅಸಮಾಧಾನ ಹೊರಹಾಕಿದರು.
Last Updated : Dec 17, 2020, 11:44 AM IST