ರಾಣೆಬೆನ್ನೂರು: ಮಳೆಯಿಂದ ಅಂಗನವಾಡಿ ಕಟ್ಟಡ ಕುಸಿತ - Ranebennur News 2020
ರಾಣೆಬೆನ್ನೂರು: ಕಳೆದೆರಡು ದಿನಗಳಿಂದ ರಾಣೆಬೆನ್ನೂರು ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಸಿದ್ದಾಪುರ ತಾಂಡಾದಲ್ಲಿರುವ ಅಂಗನವಾಡಿ ಕೇಂದ್ರ ಕಟ್ಟಡದ ಮೇಲ್ಛಾವಣಿ ಕುಸಿದಿದೆ. ಸುಮಾರು 20 ವರ್ಷದ ಹಿಂದೆ ನಿರ್ಮಿಸಿರುವ ಈ ಕಟ್ಟಡ ಕಳಪೆ ಕಾಮಗಾರಿಯಿಂದ ಶಿಥಿಲಗೊಂಡಿತ್ತು. ಹೀಗಾಗಿ ಗ್ರಾಮಸ್ಥರು ಕಳೆದ ಒಂದು ವಾರದಿಂದ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳಿಸಿರಲಿಲ್ಲ ಎಂದು ತಿಳಿದು ಬಂದಿದೆ.