ಹೆಗಡೆ ಗುತ್ತಿಗೆದಾರರಿಂದ ಪಡೆದ 15% ಹಣದಿಂದ ಚುನಾವಣೆ ಮಾಡುತ್ತಿದ್ದಾರೆ: ಆನಂದ್ ಅಸ್ನೋಟಿಕರ್ - undefined
ಕಾರವಾರ: ಬಿಜೆಪಿಯ ಅನಂತಕುಮಾರ್ ಹೆಗಡೆ 25 ವರ್ಷದಲ್ಲಿ ಗುತ್ತಿಗೆದಾರರಿಂದ ಪಡೆದ 15 ಪರ್ಸೆಟ್ ಕಮಿಷನ್ಅನ್ನು ಈ ಬಾರಿಯ ಚುನಾವಣೆಯಲ್ಲಿ ಬಳಸುತ್ತಿದ್ದಾರೆ ಎಂದು ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಆರೋಪಿಸಿದ್ದಾರೆ. ಕುಮಟಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅನಂತಕುಮಾರ್ ಹೆಗಡೆ ಭ್ರಷ್ಟಾಚಾರ ಇದೀಗ ಬಯಲಾಗುತ್ತಿದೆ. ಕೇವಲ 82 ಲಕ್ಷ ಮಾತ್ರವಲ್ಲ ಇನ್ನು ಹೆಚ್ಚಿನ ಹಣ ಬಂದಿದ್ದು, ಈ ಸಂಬಂಧ ಚುನಾವಣಾ ಆಯೋಗಕ್ಕೆ ವೈಯಕ್ತಿಕವಾಗಿ ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ.