ಇಬ್ಬರ ಹೆಂಡಿರ ಮುದುಕ 27ರ ಯುವತಿಗೆ ಬಾಳು ಕೊಟ್ಟ, ಅವಳಿ ಮಕ್ಕಳ ಕೊಟ್ಟು ಪ್ರಾಣ ಬಿಟ್ಟ; ಆಮೇಲೇನಾಯ್ತು ಗೊತ್ತೇ? - ದೊಡ್ಡಬಳ್ಳಾಪುರ
ದೊಡ್ಡಬಳ್ಳಾಪುರ: ಆತ ರಿಯಲ್ ಎಸ್ಟೇಟ್ ಉದ್ಯಮಿ. ಮದುವೆ ವಯಸ್ಸಲ್ಲೇ 2 ಮದುವೆಯಾಗಿದ್ದ. ಸಾಲದ್ದಕ್ಕೆ 65ನೇ ವಯಸ್ಸಿನಲ್ಲಿ 3ನೇ ವಿವಾಹವಾದ. ಅದು 27ರ ವಯಸ್ಸಿನ ಯುವತಿಯನ್ನ. ಮದುವೆಯಾದ ವರ್ಷಕ್ಕೆ ಅವಳಿ-ಜವಳಿ ಹೆಣ್ಣು ಮಕ್ಕಳನ್ನು ಕೊಟ್ಟು ಈಗ ಪರಮಾತ್ಮನ ಪಾದ ಸೇರಿದ್ದಾನೆ. ಬದುಕಿದ್ದಾಗ ಅಪ್ಪನನ್ನ ನೋಡದ ಮೊದಲ ಪತ್ನಿ ಮಕ್ಕಳು ಅಪ್ಪ ಸತ್ತಿದ್ದೇ ತಡ ಆತನ ಆಸ್ತಿಗಾಗಿ 3ನೇ ಹೆಂಡತಿ ಬಳಿ ಇದ್ದ ಕಾಗದ ಪತ್ರ ಕಿತ್ಕೊಂಡು ಹೋಗಿ ಆಕೆ ಮತ್ತು ಆಕೆಯ ಅವಳಿ ಜವಳಿ ಹೆಣ್ಣು ಮಕ್ಕಳನ್ನ ಬೀದಿ ಪಾಲು ಮಾಡಿದ್ದಾರೆ.