ಗಾಂಧಿ ಜಯಂತಿ ನಿಮಿತ್ತ ತಮ್ಮ ಕಚೇರಿ ಸ್ವಚ್ಛಗೊಳಿಸಿದ ಅಧಿಕಾರಿ - officer cleaned
ಧಾರವಾಡ : ಅಹಿಂಸೆಯ ಹಾದಿಯಲ್ಲಿ ಕ್ರಮಿಸಿ ಸದಾ ಭಾರತೀಯರ ಮನದಲ್ಲಿ ಹಚ್ಚ ಹಸಿರಾಗಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜಯಂತಿ ದಿನಾಚರಣೆ ಹಿನ್ನೆಲೆ ಇಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ನಿರ್ದೇಶಕ ಬಿಕೆಎಸ್ ವರ್ಧನ್ ಅವರು ಮೌನವೃತ ಕೈಗೊಂಡಿದ್ದಾರೆ. ಇದಕ್ಕೂ ಮನ್ನ ತಮ್ಮ ಕಚೇರಿಯಲ್ಲಿ ಖುದ್ದು ಕಸ ಗೂಡಿಸುವುದು, ಶೌಚಾಲಯ ಸ್ವಚ್ಛತೆ ಸೇರಿದಂತೆ ಇತರ ಸ್ವಚ್ಛತಾ ಕಾಯಕ ಮಾಡುವ ಮೂಲಕ ಗಾಂಧೀಜಿ ಅವರ ಜನ್ಮ ಜಯಂತಿಯನ್ನು ಸರಳವಾದರೂ ಅರ್ಥಗರ್ಭಿತವಾಗಿ ಆಚರಣೆ ಮಾಡಿ ಗಮನ ಸೆಳೆದರು.