ಬೆಂಗಳೂರಿನಲ್ಲಿ ಬಿಯರ್ ಬಾಟಲ್ನಿಂದ ಯುಕನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ - banglore crime news
ಬೆಂಗಳೂರು: ನಗರದಲ್ಲಿ ಪುಡಿ ರೌಡಿಗಳ ಅಟ್ಟಹಾಸ ಮಿತಿ ಮೀರಿದ್ದು, ನಡು ರಸ್ತೆಯಲ್ಲೇ ಯುವಕನನ್ನು ತಡೆದು ಹಲ್ಲೆ ಮಾಡಿದ್ದಾರೆ. ಅಮಾಯಕ ಯುವಕನ ತಲೆ ಮೇಲೆ ಬಿಯರ್ ಬಾಟಲ್ನಿಂದ ಹೊಡೆದಿರುವ ಘಟನೆ ವಿವೇಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಿನ್ನೆ ಬೆಳಗಿನ ಜಾವ ಮೂವರು ಕಿಡಿಗೇಡಿಗಳು ಬಂದು ಯುವಕನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಘಟನೆ ಸಂಬಂಧ ವಿವೇಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.