ಮೋದಿಗೆ ವಿಶೇಷವಾಗಿ ಜನ್ಮದಿನದ ಶುಭಾಶಯ ತಿಳಿಸಿದ ಕಲಾವಿದ - ಗಣಪತಿ ಮೂರ್ತಿಯಲ್ಲಿ ಪ್ರೈಮ್ ಮಿನಿಸ್ಟರ್ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮ ದಿನದ ಅಂಗವಾಗಿ ಅವರ ಅಭಿಮಾನಿಗಳು ನಾನಾ ರೀತಿಯಾಗಿ ಆಚರಣೆ ಮಾಡುತ್ತಿದ್ದಾರೆ. ಆದರೆ, ಧಾರವಾಡದಲ್ಲೊಬ್ಬ ಕಲಾವಿದ ಗಣಪತಿ ಮೂರ್ತಿಯಲ್ಲಿ ಪ್ರೈಮ್ ಮಿನಿಸ್ಟರ್ ಪ್ರಧಾನಿ ನರೇಂದ್ರ ಮೋದಿ ಎಂದು ಚಿತ್ರ ತೆಗೆದು ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. ದಾನು ನಗರದ ವಿಶ್ವದಾಖಲೆ ಹೊಗೆ ಕಲಾವಿದ ಮಂಜುನಾಥ ಬಾರಕೇರ ಎಂಬವುವರು ಈ ರೀತಿ ವಿಶೇಷ ಜನ್ಮದಿನದ ಶುಭಾಶಯ ಕೋರಿದ್ದಾರೆ. ಮೋದಿ ಹೆಸರಿನಲ್ಲಿ ಗಣೇಶನ ಚಿತ್ರ ಬಿಡಿಸಿ ಶುಭಾಶಯ ತಿಳಿಸಿದ್ದಾರೆ.