ನಾನು ಬೇಲ್ ಕೊಡಲ್ಲ, ಅವಳನ್ನು ಕರೆದೊಯ್ದವರೇ ಜಾಮೀನು ಕೊಡಲಿ: ಅಮೂಲ್ಯ ತಂದೆ ಆಕ್ರೋಶ
ಚಿಕ್ಕಮಗಳೂರು: ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿ ನ್ಯಾಯಾಂಗ ಬಂಧನದಲ್ಲಿರುವ ಅಮೂಲ್ಯ ಲಿಯೋನ ಅವರ ತಂದೆ ವಾಜಿ ಅವರು ಮಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ನನ್ನ ಮಗಳು ಪ್ರತಿಭಟನೆಯಲ್ಲಿ ದೇಶದ ವಿರುದ್ಧ, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ವಿರುದ್ಧ ಘೋಷಣೆ ಕೂಗಿದ್ದು ತಪ್ಪು. ಅದಕ್ಕೆ ನಾನು ಕ್ಷಮೆಯಾಚಿಸುತ್ತೇನೆ. ನನ್ನ ಮಗಳಿಗೆ ತಕ್ಕ ಶಿಕ್ಷಯಾಗಬೇಕು. ನಾನಂತೂ ಅವಳಿಗೆ ಬೇಲ್ ಕೊಡುವುದಿಲ್ಲ. ಅವಳನ್ನು ಈ ಮಟ್ಟಕ್ಕೆ ಕರೆದುಕೊಂಡು ಹೋದವರೆ ಕೊಡಲಿ ಎಂದು ತಮ್ಮ ಆಕ್ರೋಶವನ್ನು 'ಈಟಿವಿ ಭಾರತ್' ಪ್ರತಿನಿಧಿಯೊಂದಿಗೆ ಮಾತನಾಡುತ್ತ ಹೊರಹಾಕಿದ್ದಾರೆ.