ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ - ಶಿವಮೊಗ್ಗ ಲೇಟೆಸ್ಟ್ ನ್ಯೂಸ್
ಶಿವಮೊಗ್ಗ: ಪಾಲಿಕೆ ಆವರಣದಲ್ಲಿರುವ ಅಂಬೇಡ್ಕರ್ ಅವರ ಪುತ್ಥಳಿ ಬಳಿ ದೀಪ ಬೆಳಗಿಸಿ ಜಯಂತಿ ಆಚರಣೆ ಮಾಡಲಾಯಿತು. ಮೇಯರ್ ಸುನೀತಾ ಅಣ್ಣಪ್ಪ ಸೇರಿದಂತೆ ಪಾಲಿಕೆಯ ಸದಸ್ಯರುಗಳು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ನಂತರ ಮಾತನಾಡಿದ ಮೇಯರ್, ಅಂಬೇಡ್ಕರ್ ಅವರ ದೂರದೃಷ್ಟಿಯಿಂದ ಭಾರತಕ್ಕೆ ಉತ್ತಮ ಸಂವಿಧಾನ ಲಭ್ಯವಾಗಿದೆ. ಸಂವಿಧಾನದ ರಚನೆಯಿಂದಾಗಿ ಮೀಸಲಾತಿ ಲಭ್ಯವಾಗಿ ಅಧಿಕಾರ ಅನುಭವಿಸುವಂತಾಗಿದೆ ಎಂದರು.