ಬಾಬಾಸಾಹೇಬ್ ಅಂಬೇಡ್ಕರ್ 63ನೇ ಪರಿನಿಬ್ಬಾಣ ದಿನಾಚರಣೆ - ಚಿಕ್ಕೋಡಿಯಲ್ಲಿ ಅಂಬೇಡ್ಕರ್ ಪರಿನಿರ್ವಾಣ ದಿನ ಆಚರಣೆ ನ್ಯೂಸ್
ಬಾಬಾಸಾಹೇಬ್ ಅಂಬೇಡ್ಕರ್ ಅವರ 63ನೇ ಪರಿನಿಬ್ಬಾಣ ದಿನವನ್ನು ರಾಜ್ಯದ ವಿವಿಧ ಕಡೆ ಆಚರಣೆ ಮಾಡಲಾಯ್ತು. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ಮೇಣದ ಬತ್ತಿ ಹಚ್ಚಿ ಆಚರಣೆ ಮಾಡಿದರು. ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪರಿನಿಬ್ಬಾಣ ದಿನ ಆಚರಣೆ ಮಾಡಲಾಯಿತು.ಗಂಗಾವತಿಯಲ್ಲಿ ಕೂಡ ಆಚರಣೆ ಮಾಡಲಾಗಿದ್ದು, ಶೋಷಿತರು, ಬಡವರು, ದಲಿತರು ಹಾಗೂ ಅಲ್ಪಸಂಖ್ಯಾತರು ಇಂದು ಸಮಾಜದ ಮುಖ್ಯವಾಹಿನಿಯಲ್ಲಿ ಮುಕ್ತವಾಗಿ ಬೆರೆಯಲು ದೇಶದ ಮೊದಲ ಕಾನೂನು ಸಚಿವ ಡಾ.ಬಿ.ಆರ್. ಅಂಬೇಡ್ಕರ್ ಕಾರಣ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು. ಇನ್ನು ಯಾದಗಿರಿಯಲ್ಲಿ ಮೇಣದ ಬತ್ತಿ ಮೂಲಕ ಮೌನ ಮೆರವಣಿಗೆಯನ್ನು ನಡೆಸಲಾಯಿತು.