ಕರ್ನಾಟಕ

karnataka

ETV Bharat / videos

ವಿಕ್ಟೋರಿಯಾ ಆಸ್ಪತ್ರೆಗೆ ಅಲೋಕ್ ಕುಮಾರ್ ಭೇಟಿ: ಸಿಬ್ಬಂದಿ ಆರೋಗ್ಯ ವಿಚಾರಣೆ - ರಾಜ್ಯ ಪೊಲೀಸ್ ಮೀಸಲು ಪಡೆಯ ಎಡಿಜಿಪಿ ಅಲೋಕ್‌‌ ಕುಮಾರ್

By

Published : Jul 11, 2020, 12:21 PM IST

ಬೆಂಗಳೂರು: ಕೊರೊನಾ ನಿಯಂತ್ರಿತ ಪ್ರದೇಶಗಳಲ್ಲಿ ಹಾಗೂ ಕ್ವಾರಂಟೈನ್‌ ಕೇಂದ್ರಗಳ ಮುಂದೆ ಆತಂಕದ ನಡುವೆಯೂ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನ ರಾಜ್ಯ ಪೊಲೀಸ್ ಮೀಸಲು ಪಡೆಯ (ಕೆಎಸ್​ಆರ್​ಪಿ) ಎಡಿಜಿಪಿ ಅಲೋಕ್‌‌ ಕುಮಾರ್ ಭೇಟಿಯಾಗಿ ಆತ್ಮವಿಶ್ವಾಸ ತುಂಬಿದ್ದಾರೆ‌‌. ಕೊರೊನಾ ಆಸ್ಪತ್ರೆಯಾಗಿ ಪರಿವರ್ತನೆಯಾಗಿರುವ ವಿಕ್ಟೊರಿಯಾ ಆಸ್ಪತ್ರೆ ಮುಂದೆ ಕೆಲಸ ಮಾಡುತ್ತಿರುವ ಕೆಎಸ್​ಆರ್​ಪಿ ಸಿಬ್ಬಂದಿಯನ್ನ ಭೇಟಿ ಮಾಡಿ ಅಹವಾಲು ಆಲಿಸಿದರು. ಬಳಿಕ ಸಂದಿಗ್ಧ ಪರಿಸ್ಥಿಯಲ್ಲಿ ಕೆಲಸ‌‌ ಮಾಡುತ್ತಿರುವ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದರು. ಇಲ್ಲಿನ‌ ಪ್ರತಿಯೊಬ್ಬ ಸಿಬ್ಬಂದಿ ಅತ್ಯಂತ ಜಾಗರೂಕತೆಯಿಂದ ಕೆಲಸ ಮಾಡಬೇಕು. ಗರಿಷ್ಠ ಸುರಕ್ಷಿತ ಕ್ರಮಗಳೊಂದಿಗೆ ಕೆಲಸ ಮಾಡಿ. ಆದಷ್ಟು ಬಿಸಿ ನೀರು, ಕಷಾಯ ಕುಡಿಯಿರಿ. ಯೋಗ, ಪ್ರಾಣಾಯಾಮ ಮಾಡಿದರೆ ಯಾವುದೇ ವೈರಾಣು ಹತ್ತಿರ ಸುಳಿಯುವುದಿಲ್ಲ ಎಂದು ಸಲಹೆ‌ ನೀಡಿದರು. ಬಳಿಕ ಶಿವಾಜಿನಗರ ಹಾಗೂ ಜೆ.ಜೆ.ನಗರಕ್ಕೂ ಭೇಟಿಯಾಗಿ ಅಲ್ಲಿನ ಸಿಬ್ಬಂದಿಗೂ ಆತ್ಮಸ್ಥೆರ್ಯ ತುಂಬಿದರು.

ABOUT THE AUTHOR

...view details