ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ್ ಗೆಲುವು ಖಚಿತ: ವಿಶ್ವಾಸ ವ್ಯಕ್ತಪಡಿಸಿದ ವಿಜಯಾನಂದ - Veena Kashappanavar
ನಮ್ಮ ಕುಟುಂಬ ಗ್ರಾಮ ಪಂಚಾಯತಿಯಿಂದಲೂ ರಾಜಕೀಯ ಮಾಡುತ್ತಾ ಬಂದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾವುದೇ ಅಭಿವೃದ್ಧಿ ಮಾಡದ ಕಾರಣ ಈ ಸಾರಿ ಬದಲಾವಣೆ ಆಗುವುದು ಖಚಿತ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ವಿಶ್ವಾಸ ವ್ಯಕ್ತಪಡಿಸಿದರು. ಹಾವರಗಿ ಗ್ರಾಮದ ಮತಗಟ್ಟೆ ಸಂಖ್ಯೆ 19ರಲ್ಲಿ ಪತ್ನಿ ಹಾಗೂ ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ್ ಮತದಾನದ ಬಳಿಕ ತಾವೂ ಮತ ಚಲಾಯಿಸಿ 'ಈಟಿವಿ ಭಾರತ್' ಜೊತೆಗೆ ಮಾತುಕತೆ ನಡೆಸಿದರು.
Last Updated : Apr 23, 2019, 5:40 PM IST