ಬಿಜೆಪಿಯಿಂದ ಪೊಲೀಸ್ ಇಲಾಖೆ ದುರ್ಬಳಕೆ ಆರೋಪ: ಪ್ರತಿಭಟನೆ ವೇಳೆ ಕೈ ನಲ್ಲಿನ ಅಸಮಾಧಾನ ಬಹಿರಂಗ? - ಕಾಂಗ್ರೆಸ್ ನಾಯಕರಿಂದ ಪ್ರತಿಭಟನೆ
ಬೆಂಗಳೂರು: ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ದೌರ್ಜನ್ಯ ಎಸಗುತ್ತಿದೆ ಎಂದು ಆರೋಪಿಸಿ, ರಾಜ್ಯ ಕಾಂಗ್ರೆಸ್ ನಾಯಕರು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ರು. ಆದರೆ ಪಕ್ಷದ ಎಲ್ಲ ನಾಯಕರು ಒಮ್ಮತದಿಂದ ಭಾಗವಹಿಸಿದ್ದರೆ, ಇದರ ಯಶಸ್ಸು ಇಮ್ಮಡಿಗೊಳ್ಳುತ್ತಿತ್ತು. ಘಟಾನುಘಟಿ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸದೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.