ಕರ್ನಾಟಕ

karnataka

ETV Bharat / videos

ಅಗತ್ಯ ವಸ್ತುಗಳ ಕಿಟ್ ವಿತರಿಸುವಲ್ಲಿ ನಿರ್ಲಕ್ಷ್ಯ ಆರೋಪ: ತಹಶೀಲ್ದಾರ್ ಕಚೇರಿಗೆ ಮಹಿಳೆಯರ ಮುತ್ತಿಗೆ - ತಹಶೀಲ್ದಾರ್ ಕಚೇರಿಗೆ ಮುತ್ತಿಗೆ

By

Published : Apr 16, 2020, 1:49 PM IST

ಕಳೆದ ನಾಲ್ಕೈದು ದಿನಗಳಿಂದ ನಮ್ಮ ಏರಿಯಾದಲ್ಲಿ ಹಾಲು ವಿತರಿಸುತ್ತಿಲ್ಲ, ಅಲ್ಲದೇ ಅಗತ್ಯ ವಸ್ತುಗಳ ಕಿಟ್ ಸಮರ್ಪಕವಾಗಿ ವಿತರಣೆಯಾಗುತ್ತಿಲ್ಲ, ತಾರತಮ್ಯವಾಗುತ್ತಿದೆ ಎಂದು ಆರೋಪಿಸಿ ಕೆಲ ಮಹಿಳೆಯರು ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ಗಂಗಾವತಿಯಲ್ಲಿ ನಡೆದಿದೆ. ನಗರದ ನೀಲಕಂಠೇಶ್ವರ ವೃತ್ತದ ಸಮೀಪ ಇರುವ ನೀಲಕಂಠೇಶ್ವರ ಕ್ಯಾಂಪ್​​ನ ಸುಮಾರು 30ಕ್ಕೂ ಹೆಚ್ಚು ಮಹಿಳೆಯರು, ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ತೀವ್ರ ಅಸಮಧಾನ ವ್ಯಕ್ತಪಡಿಸಿ, ಕೆಲ ಕಾಲ ಸ್ಥಳದಲ್ಲಿ ಧರಣಿ ನಡೆಸಿದರು. ಬಳಿಕ ಮಹಿಳೆಯರ ಸಮಸ್ಯೆ ಆಲಿಸಿದ ತಹಶೀಲ್ದಾರ್ ಚಂದ್ರಕಾಂತ್ ಈ ಬಗ್ಗೆ ಗಮನ ಹರಿಸುವುದಾಗಿ ಭರವಸೆ ನೀಡಿದರು.

ABOUT THE AUTHOR

...view details