ಕಾಂಗ್ರೆಸ್ ನಿಸ್ತೇಜತೆ ಎಂಬ 'ಟ್ರಬಲ್'ಗೆ ಹೊಸ ಸಾರಥಿ ಶೂಟ್.. ಡಿಕೆಶಿ ಮಹತ್ವಾಕಾಂಕ್ಷೆಗೆ 'ಸಿದ್ದು' 3 ಅಂಕುಶ!? - ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೇರಿದ ಡಿಕೆಶಿ
ಹೈಕಮಾಂಡ್ ನೀಡಿದ ಟಾಸ್ಕ್‌ಗಳನ್ನು ಶಿರಬಾಗಿ ಪಾಲಿಸುತ್ತಿದ್ದ ಕನಕಪುರ ಬಂಡೆ ಖ್ಯಾತಿಯ ಡಿ ಕೆ ಶಿವಕುಮಾರ್‌ಗೆ ಪರ-ವಿರೋಧದ ನಡುವೆಯೂ ಕೆಪಿಸಿಸಿ ಪಟ್ಟ ಸಿಕ್ಕಿದೆ. ಹಲವು ದಿನಗಳಿಂದ ಅಧ್ಯಕ್ಷರಿಲ್ಲದೆ ಬಡವಾಗಿದ್ದ ಕೈ ಕೋಟೆಗೆ ಡಿಶಿಕೆ ಸಾರಥ್ಯದಿಂದ ಬಲ ಬಂದಂತಾಗಿದೆ.