ಸಿಂಥೆಟಿಕ್ ಟ್ರ್ಯಾಕ್ ಮೇಲೆ ಬಾಟಲಿ ಒಡೆದು ವಿಕೃತಿ : ಇದು ಕುಡುಕರು ಅವಾಂತರ - latest news for chitradurga
ಚಿತ್ರದುರ್ಗ ಜಿಲ್ಲೆಯಲ್ಲಿ ಮದ್ಯವ್ಯಸನಿಗಳ ಪುಂಡಾಟ ಮುಂದುವರೆದಿದೆ. ನಗರದಲ್ಲಿರುವ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಕುಡುಕರು ಕುಡಿದ ಮತ್ತಿನಲ್ಲಿ ಮದ್ಯದ ಬಾಟಲಿಗಳನ್ನು ಸಿಂಥೆಟಿಕ್ ಟ್ರ್ಯಾಕ್ ಮೇಲೆ ಒಡೆಯುವ ಮೂಲಕ ದುಸ್ಕೃತ್ಯ ಎಸಗಿದ್ದಾರೆ. ಇದರಿಂದ ಬೆಳ್ಳಂ ಬೆಳಗ್ಗೆ ವಾಯುವಿಹಾರಕ್ಕೆ ಆಗಮಿಸಿದವರ ಆಕ್ರೋಶಕ್ಕೆ ಕಾರಣವಾಗಿದೆ.