ಸಾಹಿತ್ಯ ಸಮ್ಮೇಳನದಲ್ಲಿ ಹೇಗಿದೆ ಗೊತ್ತೇ ಊಟೋಪಚಾರದ ವ್ಯವಸ್ಥೆ? - ಉತ್ತರ ಕರ್ನಾಟಕ ಶೈಲಿಯ ಭೋಜನ ವ್ಯವಸ್ಥೆ
ಕಲಬುರಗಿಯಲ್ಲಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಜನರಿಗೆ ಉತ್ತರ ಕರ್ನಾಟಕ ಶೈಲಿಯ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ರುಚಿಕಟ್ಟಾದ ಊಟ ಸವಿಯಲು ಸಾವಿರಾರು ಬಾಣಸಿಗರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಬೆಳಗ್ಗೆಯಿಂದ ಅಡುಗೆ ಕೋಣೆಯಲ್ಲಿ ಬಾಣಸಿಗರು ಊಟ ತಯಾರಿಕೆಯಲ್ಲಿ ತೊಡಗಿದ್ದರು. ಬೆಳಗ್ಗೆಯ ಉಪಹಾರವಾಗಿ ಮೈಸೂರು ಪಾಕ್, ಸುಸುಲ(ಮಂಡಕ್ಕಿ ವಗ್ಗರಣೆ), ಮಿರ್ಚಿ ತಯಾರಿಸಿದ್ರೆ, ಮಧ್ಯಾಹ್ನದ ಭೋಜನವಾಗಿ ಅನ್ನ, ಸಾರು, ಚಪಾತಿ, ಶೇಂಗಾ ಹೋಳಿಗೆ, ಪಲ್ಲೆಗಳನ್ನು ದೊಡ್ಡ ಗಾತ್ರದ ಪಾತ್ರೆಗಳಲ್ಲಿ ತಯಾರಿಸಲಾಗಿತ್ತು. ಈ ಕುರಿತು ನಮ್ಮ ಪ್ರತಿನಿಧಿ ವಿವರವಾದ ಮಾಹಿತಿ ನೀಡಿದ್ದಾರೆ.